ಬಾನಿಗೊಂದು ಎಲ್ಲೆ ಎಲ್ಲಿದೆ

ಪ್ರೇಮದ ಕಾಣಿಕೆ
ಚಿ|| ಉದಯಶಂಕರ್
ಉಪೇಂದ್ರ ಕುಮಾರ್

ಬಾನಿಗೊಂದು ಎಲ್ಲೆ ಎಲ್ಲಿದೆ

ನಿನ್ನಾಸೆಗೆಲ್ಲಿ ಕೊನೆಯಿದೆ

ಏಕೆ ಕನಸು ಕಾಣುವೆ

ನಿಧಾನಿಸು ನಿಧಾನಿಸು || ಪ ||

ಆಸೆಯೆಂಬ ಬಿಸಿಲುಗುದುರೆ ಏಕೆ ಏರುವೆ

ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ

ಅವನ ನಿಯಮ ಮೀರಿ ಇಲ್ಲಿ ಏನು ಸಾಗದು

ನಾವು ನೆನೆಸಿದಂತೆ ಬಾಳಲೇನು ನಡೆಯದು

ವಿಷಾದವಾಗಲಿ ವಿನೋದವಾಗಲಿ

ಅದೇನೆ ಅಗಲಿ ಅವನೆ ಕಾರಣ || ೧ ||

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು

ಬಯಸಿದಾಗ ಕಾಣದಿರುವ ಎರಡು ಮುಖಗಳು

ಹರುಷವೊಂದೆ ಯಾರಿಗುಂಟು ಹೇಳು ಜಗದಲಿ

ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ

ದುರಾಸೆ ಏತಕೆ ನಿರಾಸೆ ಏತಕೆ

ಅದೇನೆ ಬಂದರು ಅವನ ಕಾಣಿಕೆ || ೨ ||

ಪ್ರೇಮದ ಕಾಣಿಕೆ

ಚಿತ್ರ ನೋಡಿ